ವಿಶ್ವದ ಅತ್ಯಂತ ಪ್ರಮುಖ ಸೌಂದರ್ಯ ಸ್ಪರ್ಧೆಗಳೆಂದು ಪರಿಗಣಿಸಲಾಗಿರುವ ಬಿಗ್ ಫೋರ್ ಸೌಂದರ್ಯ ಸ್ಪರ್ಧೆಗಳಲ್ಲಿ ಭಾರತದ ಅಧಿಕೃತ ಪ್ರತಿನಿಧಿಗಳು ಮತ್ತು ಅವರ ನಿಯೋಜನೆಗಳ ಪಟ್ಟಿ ಈ ಕೆಳಗಿನಂತಿದೆ. ದೇಶವು ಎಲ್ಲಾ ನಾಲ್ಕು ಸ್ಪರ್ಧೆಗಳಲ್ಲಿ ಎಂಭತ್ತೊಂದು ಸ್ಪರ್ಧಿಗಳ ಮೂಲ ಒಟ್ಟು ಹತ್ತು ಪ್ರಶಸ್ತಿಗಳನ್ನು ಗಳಿಸಿದೆ. ಭಾರತ ಮೂರು-ಮಿಸ್ ಯೂನಿವರ್ಸ್ ಕಿರೀಟಗಳನ್ನು ಪಡೆದ ವರ್ಷಗಳು (1994 • 2000 • 2021) ಭಾರತ ಆರು-ವಿಶ್ವ ಸುಂದರಿ ಕಿರೀಟಗಳನ್ನು ಪಡೆದ ವರ್ಷಗಳು (1966 • 1994 • 1997 • 1999 • 2000 • 2017) ಭಾರತ ಮಿಸ್ ಅರ್ಥ್ ಕಿರೀಟ ಪಡೆದ ವರ್ಷ (2010) ಈ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಸ್ಪರ್ಧಿಗಳನ್ನು ಮಿಸ್ ದಿವಾ (ಮಿಸ್ ಯೂನಿವರ್ಸ್), ಫೆಮಿನಾ ಮಿಸ್ ಇಂಡಿಯಾ(ಮಿಸ್ ವರ್ಲ್ಡ್) ಗ್ಲಾಮಾನಂದ್ ಸೂಪರ್ ಮಾಡೆಲ್ ಇಂಡಿಯಾ (ಮಿಸ್ ಇಂಟರ್ನ್ಯಾಷನಲ್) ಮತ್ತು ಮಿಸ್ ಡಿವೈನ್ ಬ್ಯೂಟಿ (ಮಿಸ್ ಅರ್ಥ್) ಸ್ಪರ್ಧೆಗಳಲ್ಲಿ ಕ್ರಮವಾಗಿ ಆಯ್ಕೆ ಮಾಡಲಾಗುತ್ತದೆ. == ಭಾರತದ ನಾಲ್ಕು ದೊಡ್ಡ ಸೌಂದರ್ಯಸ್ಪರ್ಧೆಗಳ ಪ್ರಶಸ್ತಿ ವಿಜೇತರು == ಭಾರತದ ರೀಟಾ ಫರಿಯಾ ಅವರು ಮಿಸ್ ವರ್ಲ್ಡ್ 1966 ಪ್ರಶಸ್ತಿಯನ್ನು ಗೆದ್ದಾಗ ಭಾರತವು ತನ್ನ ಮೊದಲ ಬಿಗ್ ಫೋರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇವರು ಮಿಸ್ ವರ್ಲ್ಡ್ ಗೆದ್ದ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರವಾದರು . 1994ರಲ್ಲಿ, ಸುಷ್ಮಿತಾ ಸೇನ್ ಮಿಸ್ ಯೂನಿವರ್ಸ್ 1994 ಪ್ರಶಸ್ತಿಯನ್ನು ಗೆದ್ದು ದೇಶದ ಮೊದಲ ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಆ ವರ್ಷದ ನಂತರ, ಐಶ್ವರ್ಯಾ ರೈ ಅವರು 1994 ರ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಗೆಲುವಿನ ಪರಂಪರೆಯನ್ನು ಹೆಚ್ಚಿಸಿದರು. ಡಯಾನಾ ಹೇಡನ್ ೧೯೯೭ ರಲ್ಲಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದರು. ನಟಿ ಮತ್ತು ರೂಪದರ್ಶಿ ಯುಕ್ತಾ ಮುಖೀ ೧೯೯೯ ರಲ್ಲಿ ವಿಶ್ವ ಸುಂದರಿ ಪಟ್ಟಕ್ಕೆ ಭಾಜನರಾದರು. ಸುಷ್ಮಿತಾ ಸೇನ್ ಮತ್ತು ಐಶ್ವರ್ಯಾ ರೈ ಅವರ ಎರಡು ಗೆಲುವುಗಳ ಆರು ವರ್ಷಗಳ ನಂತರ ೨೦೦೦ನೇ ಇಸವಿಯ ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ಲಾರಾ ದತ್ತಾ ಗೆದ್ದರು. ೨೦೦೦ನೇ ಇಸವಿಯ ಮಿಸ್ ವರ್ಲ್ಡ್ ಪ್ರಶಸ್ತಿ ಗೆದ್ದ ಪ್ರಿಯಾಂಕಾ ಚೋಪ್ರಾ 2000ನೇ ಇಸವಿ ಯಲ್ಲಿ ಒಂದೇ ವರ್ಷದಲ್ಲಿ ಭಾರತೀಯರು ಎರಡು ದೊಡ್ಡ ಸೌಂದರ್ಯ ಸ್ಪರ್ಧೆಗಳ ಪ್ರಶಸ್ತಿಯನ್ನು ಗೆದ್ದ ಇತಿಹಾಸವನ್ನು ಪುನರಾವರ್ತಿಸಿದರು. ಇದರಿಂದ ೨೦ನೇ ಶತಮಾನದಲ್ಲಿ ಒಂದೇ ವರ್ಷದಲ್ಲಿ ಮಿಸ್ ಯೂನಿವರ್ಸ್ ಮತ್ತು ಮಿಸ್ ವರ್ಲ್ಡ್ ಎರಡರಲ್ಲೂ ಜಯಗಳಿಸಿದ ಕೊನೆಯ ದೇಶ ಭಾರತ ಎಂಬ ಸಾಧನೆಯನ್ನು ಭಾರತಕ್ಕೆ ತಂದುಕೊಟ್ಟಿದೆ. 1992 ರಿಂದ 2002 ಮಿಸ್ ಯೂನಿವರ್ಸ್ ಸೆಮಿಫೈನಲ್ನಲ್ಲಿ ಭಾರತ ಕಾಣಿಸಿಕೊಂಡಿತ್ತು. ಈ ಸಾಧನೆ ಕನಿಷ್ಠ ೧೦ ಸತತ ವರ್ಷಗಳ ಕಾಲ ಈ ದೊಡ್ಡ ಸೌಂದರ್ಯ ಸ್ಪರ್ಧೆಯಲ್ಲಿ ಸೆಮಿ ಫೈನಲ್ ಸ್ಥಾನ ಪಡೆದ ಪೂರ್ವ ಗೋಳಾರ್ಧದ ಮೊದಲ ದೇಶ ಭಾರತ ಎಂಬ ಸಾಧನೆಯನ್ನು ಮಾಡಿದೆ. ೨೦೧೦ರಲ್ಲಿ ಬೆಂಗಳೂರಿನ ನಿಕೋಲ್ ಫರಿಯಾ ಅವರು ಮಿಸ್ ಅರ್ಥ್ 2010 ಸ್ಪರ್ಧೆಯನ್ನು ಗೆದ್ದ ಮೊದಲ ಭಾರತೀಯ ಮಹಿಳೆಯಾದರು. ೨೦೧೭ ರಲ್ಲಿ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ ಭಾರತದ ಆರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಮಾನುಷಿ ಛಿಲ್ಲರ್ ಪಾತ್ರರಾಗಿದ್ದಾರೆ. ಹರ್ನಾಜ್ ಸಂಧು ಮಿಸ್ ಯೂನಿವರ್ಸ್ 2021 ಪ್ರಶಸ್ತಿಯನ್ನು ಗೆದ್ದು ಮಿಸ್ ಯೂನಿವರ್ಸ್ ಕಿರೀಟವನ್ನು ಪಡೆದ ಮೂರನೇ ಭಾರತೀಯ ಮಹಿಳೆಯಾಗಿದ್ದಾರೆ ಮತ್ತು 2024 ರ ಹೊತ್ತಿಗೆ ಭಾರತದಿಂದ ಬಿಗ್ ಫೋರ್ ಸ್ಪರ್ಧೆಯ ಪ್ರಶಸ್ತಿಯನ್ನು ಪಡೆದ ಕೊನೆಯ ವ್ಯಕ್ತಿಯಾಗಿದ್ದಾರೆ . ಬಣ್ಣದ ಕೀಲಿ × ಸ್ಪರ್ಧಿಸಲಿಲ್ಲ ^ ಯಾವುದೇ ಸ್ಪರ್ಧೆ ನಡೆದಿಲ್ಲ == ಆತಿಥ್ಯಗಳು == == ಕ್ರಾಸ್ ಓವರ್ಗಳ ಪಟ್ಟಿ == ರಾಷ್ಟ್ರೀಯ ಸ್ಪರ್ಧೆಯ ಕ್ರಾಸ್ಒವರ್ ವಿಜೇತರು ಮತ್ತೊಂದು ಪ್ರಮುಖ ರಾಷ್ಟ್ರೀಯ ಸ್ಪರ್ಧೆಯಲ್ಲಿ ಗೆಲ್ಲುತ್ತಾರೆ ಮತ್ತು ನಂತರ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ಅಯೋನಾ ಪಿಂಟೋ-1960 ರಲ್ಲಿ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದ ಭಾರತದ ಪ್ರತಿನಿಧಿ. ನಂತರ ಅವರು ಮಿಸ್ ಇಂಟರ್ನ್ಯಾಷನಲ್ 1960 ರಲ್ಲಿ ಭಾಗವಹಿಸಿದರು. ಅಲ್ಲಿ ಅವರು ಮೊದಲ ರನ್ನರ್ ಅಪ್ ಆಗಿದ್ದರು. ಆಕೆಯ ದೇಶವು ಅವಳನ್ನು ಮತ್ತೆ ಮಿಸ್ ವರ್ಲ್ಡ್ 1960 ಗೆ ಕಳುಹಿಸಿತು. ಅಲ್ಲಿ ಅವಳು ಹದಿನೆಂಟನೇ ಸೆಮಿಫೈನಲಿಸ್ಟ್ಗಳಲ್ಲಿ ಒಬ್ಬಳಾಗಿದ್ದಳು. ಪ್ರೀತಿ ಮಂಕೋಟಿಯಾ-1991ರಲ್ಲಿ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದ ಭಾರತದ ಪ್ರತಿನಿಧಿ. ನಂತರ ಅವರು ಮಿಸ್ ಇಂಟರ್ನ್ಯಾಷನಲ್ 1991 ರಲ್ಲಿ ಭಾಗವಹಿಸಿದರು. ಅಲ್ಲಿ ಅವರು ಹದಿನೈದು ಅಂತಿಮ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಅವರು ಮತ್ತೆ ಫೆಮಿನಾ ಮಿಸ್ ಇಂಡಿಯಾ 1995 ರಲ್ಲಿ ಭಾಗವಹಿಸಿದರು. ಅಲ್ಲಿ ಅವರು ಮಿಸ್ ಇಂಡಿಯಾ ವರ್ಲ್ಡ್ ಕಿರೀಟವನ್ನು ಪಡೆದರು ಮತ್ತು ಮಿಸ್ ವರ್ಲ್ಡ್ 1995 ರಲ್ಲಿ ಭಾಗವಹಿಸಿದರು. ಅಲ್ಲಿ ಅವರು ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. == ಇದನ್ನೂ ನೋಡಿ == 2010 ಮತ್ತು 2012ರಲ್ಲಿ ಐ ಆಮ್ ಶೀ-ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಿಂದ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಭಾರತದ ಪ್ರತಿನಿಧಿಗಳನ್ನು ಕಳುಹಿಸಲಾಗುತ್ತಿತ್ತು. 1968ರಿಂದ 1975ರವರೆಗೆ ಭಾರತದಲ್ಲಿ ನಡೆಯುತ್ತಿದ್ದ ಭಾರತ್ ಸುಂದರಿ ಸ್ಪರ್ಧೆಯಿಂದ ವಿಶ್ವಸುಂದರಿ ಸ್ಪರ್ಧೆಗೆ ಭಾರತದೆ ಪ್ರತಿನಿಧಿಗಳನ್ನು ಕಳುಹಿಸಲಾಗುತ್ತಿತ್ತು. . == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಫೆಮಿನಾ ಮಿಸ್ ಇಂಡಿಯಾ ಅಧಿಕೃತ ಜಾಲತಾಣ 2013-05-15 ವೇಬ್ಯಾಕ್ ಮೆಷಿನ್ ನಲ್ಲಿ. 2013-05-15